ಸಂಸದ ಶ್ರೀರಾಮುಲುಗೆ ಕೇಂದ್ರ ಸಚಿವ ಸ್ಥಾನ ಗ್ಯಾರಂಟಿ.

ಸರ್ಕಾರಿಬಾಬು ಮೂಲಗಳ ಪ್ರಕಾರ ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಕೇಂದ್ರ ಸಚಿವ ಸ್ಥಾನ ದೊರೆಯುವುದು ಖಚಿತವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ನಾಯಕ ಸಮುದಾಯದ ಪ್ರಭಾವಿ ನಾಯಕನಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಇನ್ನೊಂದು ವಾರದಲ್ಲಿ ಕೇಂದ್ರ ಸಂಪುಟ ವಿಸ್ತರಣೆ ನಡೆಯಲಿದ್ದು ರೈಲ್ವೇ ರಾಜ್ಯ ಸಚಿವ ಸ್ಥಾನ ದೊರೆಯುವ ಸಂಭವ ಇದೆ.

ಸಂಸದ ಶ್ರೀರಾಮುಲು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಅಮಿತ್ ಷಾ ಅವರಿಂದ ಕರೆಯ ನಿರೀಕ್ಷೆಯಲ್ಲಿದ್ದಾರೆ.

Advertisements

ಹಾಸನದಲ್ಲಿ ಪತ್ರಕರ್ತ ಎಮ್ಮೆಲ್ಲೆ ಕ್ಯಾಂಡಿಡೇಟ್?

ಸದಾ ಒಂದಿಲ್ಲೊಂದು ಕುತೂಹಲಕರ ಬೆಳವಣಿಗೆಯಿಂದ ಗಮನ ಸೆಳೆಯುವ ಹಾಸನದ ರಾಜಕೀಯ ವಲಯದಲ್ಲೀಗ ಪತ್ರಕರ್ತರೊಬ್ಬರು ಮುಂದಿನ ವಿಧಾನಸಭೆ ಚುನಾವಣೆ ಕ್ಯಾಂಡಿಡೇಟ್ ಆಗಲಿದ್ದಾರೆ ಎನ್ನುವುದು ಚರ್ಚೆಯ ವಿಷಯವಾಗಿದೆ.

ಹಲೋ ಹಾಸನ್ ದಿನಪತ್ರಿಕೆ ಸಂಪಾದಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೂಡು ಅವರ ಹೆಸರು ಹಾಸನ ವಿಧಾನಸಭಾ ಕ್ಷೇತ್ರದ ಪ್ರಮುಖ ಪಕ್ಷವೊಂದರ ಟಿಕೆಟ್ ಆಕಾಂಕ್ಷಿಗಳ ನಡುವೆ ಓಡಾಡಲಾರಂಭಿಸಿದೆ.
ಎಲ್ಲ ಪಕ್ಷಗಳ ಮುಖಂಡರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ರವಿ, ಒಂಥರ ‘friend of all’ ರೀತಿಯ ವ್ಯಕ್ತಿತ್ವದವರು.
ಪ್ತಮುಖ ನಾಯಕರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವುದರಿಂದ ಅವರೇ ರವಿ ನಾಕಲಗೂಡು ಅವರನ್ನು ಹಾಸನದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಹೊಸಬರಿಗೆ ಮಣೆ ಹಾಕುವುದಾದರೆ ರವಿ ಉತ್ತಮ ಆಯ್ಕೆ ಎಂದು ಕೆಲ ಮುಖಂಡರು ಅಲ್ಲಲ್ಲಿ ಮಾತನಾಡುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಪತ್ರಕರ್ತ ಪ್ರತಾಪ್ ಸಿಂಹ ದಿಢೀರನೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಉದಾಹರಣೆ ಕಣ್ಮುಂದಿರುವಾಗ ಮೈಸೂರು ಪಕ್ಕದ ಹಾಸನಲ್ಲೂ ಪತ್ರಕರ್ತರೊಬ್ಬರು ರಾಜಕಾರಣಿಯಾಗುವ ಬೆಳವಣಿಗೆ ಅಸಾಧ್ಯವೇನಲ್ಲ.
ಯುವಕ, ಸಂಘಟನಾ ಚತುರ, ಎಲ್ಲ ಜನಾಂಗದವರೊಂದಿಗೆ ಒಡನಾಟವಿದೆ ಎಂಬ ಪಾಸಿಟಿವ್ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿಸಿರುವ ರವಿ ಎಮ್ಮೆಲ್ಲೆ ಕ್ಯಾಂಡಿಡೇಟ್ ಆಗುವುದು ಅಸಾಧ್ಯವೇನಲ್ಲ. ದೆಹಲಿ ಆಮ್ ಆದ್ಮಿ ಪಾರ್ಟಿಯ ಮೂಲಕ ಪತ್ರಕರ್ತರು ರಾಜಕೀಯ ಆರಂಭಿಸುವುದನ್ನು ಸ್ವಾಗತಿಸುವುದಾದರೆ ಹಾಸನದ ಸುದ್ದಿಮಿತ್ರರ ಹೆಸರು ರೇಸ್ ನಲ್ಲಿರುವುದನ್ನು ಮೆಚ್ಚಲೆಬೇಕು.

 Exclusive… ಮಾಜಿ ಮುಖ್ಯಮಂತ್ರಿಯ ರಹಸ್ಯ ‘ಸಿಡಿ’ ‘ಡೈರಿ’ ಕಳುವಾಯ್ತ…!

ಮಾಜಿ ಮುಖ್ಯಮಂತ್ರಿ ಒಬ್ಬರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಪಕ್ಷ ಸಂಸ್ಥಾಪಕನೊಬ್ಬನ ಬಳಿಯಿದೆ ಎನ್ನಲಾದ ರಹಸ್ಯ ದಾಖಲೆಗಳು ಕಳುವಾಗಿದ್ದು ಯಾರ್ಯಾರ ಬಳಿಯೋ ತಲುಪಿ ಮಾಜಿ ಮುಖ್ಯಮಂತ್ರಿ ಸಂಕಷ್ಟದಲ್ಲಿದ್ದಾರೆ ಎಂಬ ಆಸ್ಪೋಟಕ ಸುದ್ದಿ ಸರ್ಕಾರಿಬಾಬುಗೆ ತಲುಪಿದೆ.

ಪಕ್ಷ ಸಂಸ್ಥಾಪಕನ ಡ್ರೈವರ್ ತನ್ನ ಬಾಸಿನ ಬಳಿಯಿದ್ದ ಸಿಡಿ ಮತ್ತು ಡೈರಿಯನ್ನು ಎಗರಿಸಿದ್ದಾನೆ ಎನ್ನಲಾಗಿದ್ದು, ಮಾಜಿ  ಸಚಿವ ಉತ್ತರ ಕರ್ನಾಟಕದ ಕೈಗಾರಿಕೋದ್ಯಮಿಯ ಕಾರ್ ಡ್ರೈವರ್ ಗೆ  ತನ್ನ ಬಳಿಯಿದ್ದ ಡೈರಿಯನ್ನು ನೀಡಿರುವ ಸಂಗತಿ ತಿಳಿದ ಪಕ್ಷ ಸಂಸ್ಥಾಪಕರು ಸಂಪಗಿ‌ ರಾಮನಗರದ ಪೋಲೀಸರಿಗೆ ಮೌಖಿಕ ದೂರು ನೀಡಿದ್ದಾರೆ.

 ಪ್ರಕರಣದ ಗಂಭೀರತೆ ಅರಿತಿರುವ ಪೋಲೀಸರು ಇಬ್ಬರೂ ಡ್ರೈವರ್ಗಳ‌ ತೀವ್ರ ವಿಚಾರಣೆ ನಡೆದಿದೆ. ಹಿರಿಯ ಪೋಲೀಸ್ ಅಧಿಕಾರಿಗಳೇ  ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಡೈರಿ ಮತ್ತು ಸಿಡಿ ಬಗ್ಗೆ ಮಾಹಿತಿಗಳು ಈಗಾಗಲೇ  ಆಡಳಿತ ಪಕ್ಷದ ಮಂತ್ರಿ ಮಹೋದಯರಿಗೂ ತಲುಪಿದ್ದು, ವಿಷಯ ತಿಳಿದು ಮುಸಿ ಮುಸಿ ನಗುತ್ತಿದ್ದಾರೆ ಎಂದು ಸರ್ಕಾರಿ ಬಾಬು ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಅವರ ಖಾಸಗಿ ವಿಚಾರಗಳು ಡೈರಿ ಮತ್ತು ಸಿಡಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು ಯಾವಕ್ಷಣದಲ್ಲಾದರೂ ಸ್ಪೋಟಗೊಳ್ಳುವ ಸಾಧ್ಯತೆಗಳು ಇವೆ.

ರಾಷ್ಟ್ರೀಯ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಿಡಿ ಮತ್ತು ಡೈರಿಗೆ ನೇರ ಸಂಭಂದ ಇದ್ದು ಯಾವ ಕ್ಷಣದಲ್ಲಾದರೂ ಸ್ಪೋಟಗೊಳ್ಳಬಹುದು ಎನ್ನಲಾಗಿದೆ.

ಆಡಳಿತ ಪಕ್ಷದ ಪ್ರಮುಖರು ತಮ್ಮದೇ ಸಮುದಾಯದ ಮುಖಂಡರನ್ನು ನಿಯಮಿಸಿದ್ದು ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಹ್ಯಾಂಡಲ್ ಮಾಡಲು ಸೂಚಿಸಿದ್ದಾರಂತೆ.

ಬಜೆಟ್ ಬಾಷಣಕ್ಕೆ ಮೈಕ್ ಕೈಕೊಟ್ಟ ಕಥೆ ಕೇಳಿ.

ಇವತ್ತಿನ ಬಜೆಟ್ ಬಾಷಣ ಶುರುವಾದ ಸ್ವಲ್ಪ ಹೊತ್ತಿನಲ್ಲೇ ವಿಧಾನಸಭಾ ಸಂಭಾಂಗಣದಲ್ಲಿ ಅಳವಡಿಸಿದ್ದ ಎಲ್ಲಾ ಮೈಕ್ಗಳು ಕೈಕೊಟ್ಟ ಘಟನೆ ನಡೆದಿದೆ.

ಘಟನೆಯಿಂದ ಬೆಚ್ಚಿಬಿದ್ದ ತಾಂತ್ರಿಕ ವರ್ಗ ಇನ್ನೇನು ನಮ್ಮ ಕಥೆ ಮುಗಿಯಿತೂ ಎಂದುಕೊಳ್ಳುವಷ್ಟರಲ್ಲಿ ಯಾರೋ ಒಬ್ಬರು ಯಾವುದೋ ವಿದಾನಸೌಧದ ಹಳೇ ಮೈಕುಗಳನ್ನೇ ಆನ್ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ವಾಸ್ತವದಲ್ಲಿ ಕೆಲವೇ ತಿಂಗಳ ಹಿಂದೆ ಹೊಸ ಮೈಕ್ ಗಳನ್ನು ಅಳವಡಿಸಲಾಗಿತ್ತು ವಿಧಾನಸೌದದ ತಾಂತ್ರಿಕ ವಿಚಾರಗಳನ್ನು ಉಸ್ತುವಾರಿ ಹೊತ್ತಿರುವ ರಾಮಲಿಂಗಯ್ಯ ಎಂಬ ಅಧಿಕಾರಿ ಕಳಪೆ ಮೈಕುಗಳನ್ನು ಅಳವಡಿಸಿದ್ದಾರೆ ಎಂಬ ಸಂಗತಿ ಈಗ ಬಯಲಿಗೆ ಬಿದ್ದಿದೆ.

ವಿದಾನಸಭೆಯ ಕಾರ್ಯದರ್ಶಿ ಮೂರ್ತಿ ಅವರು ಅಧಿಕಾರಿಯನ್ನು ಕರೆದು ವಿಚಾರಿಸಿದರೆ ಎಂಎಲ್ ಎ ಗಳು ವೈರ್ಗಳನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ಸಬೂಬು ನೀಡಿದ್ದಾರಂತೆ..!.

ಅಧಿಕಾರದ ಮುಖ್ಯ ಕೇಂದ್ರದಲ್ಲೆ ಗೋಲ್ ಮಾಡಿರೋ ಅಧಿಕಾರಿ ಬಗ್ಗೆ ತನಿಕೆ ನಡೆಸಲು ಸ್ಪೀಕರ್ ಯೋಚನೆ ಮಾಡುತ್ತಿದ್ದಾರೆ.

ಇವತ್ತೇನಾದರೂ ಮೈಕ್ ಕೈಕೊಟ್ಟಿದ್ದರೆ ಬಜೆಟ್ ದಿನ ದೊಡ್ಡ ರಾದ್ದಾಂತವೇ ನಡೆದುಹೋಗುತ್ತಿತ್ತಂತೆ.

ಮೋದಿ ವಿರುದ್ಧ ಸ್ಟೇಟಸ್ ಡಿಲೀಟ್ ಮಾಡಿದ್ರಾ ಅಂಬಿ ಪತ್ನಿ ಸುಮಲತಾ..!?

ರಾಜಕೀಯದಲ್ಲಿ ಮತ್ತೊಂದು ರಾಕೆಟ್ ಲಾಂಚ್ ಆಗುವ ಲಕ್ಷಣಗಳು ಕಾಣ್ತಾ ಇವೆ, ಮಾಜಿ ಸಚಿವ ಅಂಬರೀಶ್ ಗೂ ಬಿಜೆಪಿ ಗಾಳ ಹಾಕಿದೆ ಅಂತ ಸರ್ಕಾರಿಬಾಬು ವರದಿ ಮಾಡಿ ತಿಂಗಳೇ ಕಳೆದು ಹೋದ ನಂತ್ರ ಈಗ ಮತ್ತೊಂದು ಸುದ್ದಿ ಕಾಂಗ್ರೆಸ್ ಅಂಗಳವನ್ನು ತಲ್ಲಣಗೊಳಿಸಲು ಮುಂದಾಗಿದೆ.

ಅಂಬಿ ಬದಲು ಸಮಲತಾ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿಗಳು ಚಾಲನೆಯಲ್ಲಿವೆ ಈ ಕುರಿತಂತೆ ಬಿಜೆಪಿ ಪ್ರೊಪಗಾಂಡವನ್ನೆ ಗುರಿಯಾಗಿಸಿ ನಡೆಸಲಾಗುತ್ತಿರೋ post card ಎಂಬ ವೆಬ್ ಸೈಟ್ ಪ್ರಕಾರ ಸುಮಲತಾ ಅವರ ಪೇಸ್ ಬುಕ್ ಅಕೌಂಟಿನಲ್ಲಿ ಈ ಹಿಂದೆ ಬರೆದಿದ್ದ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧದ ಸ್ಟೇಟಸ್ಗಳನ್ನು ಡಿಲೀಟ್ ಮಾಡಿದ್ದಾರಂತೆ, ಮೋದಿ ಮಾಡಿದ್ದ‌ ಡಿ ಮೋನೆಟೈಸ್ ಕುರಿತಂತೆ ಸುಮಲತಾ ಅವರು ಬರೆದಿದ್ದ ಎಲ್ಲಾ ವಿರೋಧಿ ಹೇಳಿಕೆಗಳನ್ನು ಡಿಲೀಟ್ ಮಾಡಿದ್ದಾರಂತೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ  ಕ್ಷೇತ್ರದಿಂದ ಸ್ಪರ್ಧೆಗೆ ಸ್ಕೆಚ್ ಹಾಕಿದ್ದು ರಾಜರಾಜೇಶ್ವರಿ ನಗರದಲ್ಲಿರುವ ಸ್ಟಾರ್ ನಟರೂ ಸುಮಲತಾ ಅವರಿಗೆ ಬೆಂಬಲ ನೀಡಿದ್ದು ಚುನಾವಣೆಯಲ್ಲಿ ಸಂಪೂರ್ಣ ಸಹಕಾರವನ್ನೂ ಘೋಷಣೆ ಮಾಡುದ್ದಾರಂತೆ.
ಸದ್ಯ ಕಾಂಗ್ರೆಸ್ ನ ಮುನಿರತ್ನ  ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಬಾರಿ ಜೆಡಿಎಸ್ ನಿಂದ ಬಂಡಾಯವೆದ್ದಿರುವ ಚಲುವರಾಯಸ್ವಾಮಿ, ಬಿಜೆಪಿಯಿಂದ ಎ ರವಿ, ಜ್ಯೋತಿ ಮುನಿರಾಜು ಮುಂತಾದವರು ಆಕಾಂಕ್ಷಿಗಳಾಗಿದ್ದಾರೆ ಆದರೂ ಸುಮಲತಾ ಟಿಕೆಟ್ ಪಡೆಯೋ ಸಾಧ್ಯತೆಗಳೆ ಹೆಚ್ಚಿವೆ.

ಅಂಬರೀಶ್ ಅವರು ತಡವಾಗಿ ಕಾಂಗ್ರೆಸ್ ತೊರೆಯಲಿದ್ದು ಅವರ ಪತ್ನಿ ಸುಮಲತಾ ಸದ್ಯದಲ್ಲೇ ಬಿಜೆಪಿ ಸೇರಿಬಿಡುವ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

‘ಶಕ್ತಿ’ ಸಮಾವೇಶಕ್ಕೆ ಕೃಷ್ಣ ಸ್ಕೆಚ್ : ಬಿಜೆಪಿಗೆ ‘ಕೃಷ್ಣಾಗಮನ’

ಹಿಂದೊಮ್ಮೆ ಪಾಂಚಜನ್ಯ ಯಾತ್ರೆಯ ಮೂಲಕ ರಾಜ್ಯದಲ್ಲಿ ಕಾಂಗ್ರೇಸ್ ಚುಕ್ಕಾಣಿ ಹಿಡಿಯಲು ಕಾರಣರಾಗಿದ್ದ ಎಸ್ ಎಂ ಕೃಷ್ಣ ಮತ್ತೊಮ್ಮೆ ‘ಶಕ್ತಿ’ ಸಮಾವೇಶವನ್ನು ನಡೆಸಲು ತೀರ್ಮಾನಿಸಿದ್ದಾರೆ.

ಇಂದು ದೆಹಲಿಯಲ್ಲಿ ಅನಂತ್ ಕುಮಾರ್ ಮನೆಯಲ್ಲಿ  ನಡೆದ ರಾಜ್ಯ ಬಿಜೆಪಿ ನಾಯಕರ ಕೋರ್ ಕಮಿಟಿ ಸಭೆಯಲ್ಲಿ ಕೃಷ್ಣಾಗಮನದ ಬಗ್ಗೆ  ಸಂಪೂರ್ಣ ರೂಪುರೇಷೆಗಳನ್ನು ಚರ್ಚಿಸಾಲಾಗಿದ್ದು ವಯೋವೃದ್ಧ ನಾಯಕನ ವರ್ಚಸ್ಸನ್ನು ಬೆಂಗಳೂರು ಮತ್ತು ಹಳೇ ಮೈಸೂರು ಭಾಗದಲ್ಲಿ ಬಳಸಿಕೊಳ್ಳಲು ಸ್ಕೆಚ್ ಹಾಕಲಾಗಿದೆ.

ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೃಷ್ಣ ಅವರನ್ನು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಲಿದ್ದು ತಕ್ಷಣವೇ ‘ಶಕ್ತಿ’ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಕೃಷ್ಣ ಅವರನ್ನು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೇ ಬೆಂಗಳೂರಿನಲ್ಲಿ ಕೃಷ್ಣ ಅವರ ಪ್ರಭಾವವನ್ನು ಬಳಸಿಕೊಳ್ಳಲು ವರಿಷ್ಟರು ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಪಾಳಯದಲ್ಲಿ ರಭಸ, ಜೆಡಿಎಸ್ ನಲ್ಲಿ ಕಲಹ, ಕಾಂಗ್ರೆಸ್ ನಲ್ಲಿ ಹಾಲಾಹಲ.

ನಿನ್ನೆ ತಾನೆ ಮುಕ್ತಾಯವಾದ ಪಂಚ ರಾಜ್ಯ ಚುನಾವಣೆಯಲ್ಲಿ ಬಂದ ಪಲಿತಾಂಶದಿಂದ ರಾಜ್ಯದ ನಾಯಕರಲ್ಲಿ ಹಲವು ಭಾವನೆಗಳನ್ನು ಬಡಿದೆಬ್ಬಿಸಿವೆ.ರಾಜ್ಯದಲ್ಲೂ ಎರಡು ಉಪಚುನಾವಣೆಗಳು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಸ್ಥಿತ್ವಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಕಾತರಿಸುತ್ತಿದೆ.

ಬಿಎಸ್ವೈ ನಂಜನಗೂಡಿನ ನಂಜುಂಡೇಶ್ವರನಿಗೆ ಪೂಜೆ ಮಾಡಿಸಿ ಇವತ್ತೇ ಆಖಾಡಕ್ಕೆ ಇಳಿದು ಶ್ರೀನಿವಾಸ್ ಪ್ರಸಾದ್ ಪರ ಪ್ರಚಾರಕ್ಕೆ ದುಮುಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೂ ಸುತ್ತೂರು ಮಠಕ್ಕೆ ತೆರಳಿ ಸ್ವಾಮೀಜಿ ಅವರ ಆಶಿರ್ವಾದ ಪಡೆದು ಚುನಾವಣಾ ಅಖಾಡಕ್ಕೆ ಜಿಗಿದಿದ್ದಾರೆ.

ವಾಸ್ತವದಲ್ಲಿ ಮುಂಬರುವ ಚುನಾವಣೆಗಳಿಗೆ ನಂಜಗೂಡು ಮತ್ತು ಗುಂಡ್ಲುಪೇಟೆ ಚಯನಾವಣೆ ಪ್ರಿಪರೇಟರಿ ಪರೀಕ್ಷೆಯೇ ಆಗಿದೆ ಎನ್ನಬಹುದು.

ಈ ಮದ್ಯೆ ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ವರ್ಚಸ್ಸು ಲಾಭವಾಗಲಿದೆ ಎಂಬ ನಂಬಿಕೆ ಹೆಚ್ಚಾಗಿದೆ, ಅದೇ ಸಮಸ್ಯೆ ವಿರೋಧ ಪಕ್ಷದ ನಾಯಕರಿಗೂ ಕಾಡಲಾರಂಭಿಸಿದೆ.

ಮುಂಬರುವ ಚುನಾವಣೆಗಳನ್ನು ಮೋದಿ ಅಮಿತ್ ಶಾ ಬಳಗ ಗಂಭೀರವಾಗೆ ಸ್ವೀಕರಿಸುವ ಲಕ್ಷಣಗಳು ಗೋಚರಿಸುತ್ತಿವೆ ವಿವಾಧಿತ ಬಿ ಎಸ್ ವೈ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡದೇ ಚುನಾವಣೆ ಎದುರಿಸೋ ಸಾದ್ಯತೆಗಳೆ ಹೆಚ್ಚಾಗಿ ಕಾಣುತ್ತಿವೆ.

ಜೆಡಿಎಸ್ ನಲ್ಲಿ ಇನ್ನೂ ಕಲಹಗಳೇ ಜಾರಿಯಲ್ಲಿ ಇದ್ದಂತೆ ಕಾಣುತ್ತಿದೆ ಜನವರಿ ತಿಂಗಳಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಇನ್ನೂ ಬಿಡುಗಡೆ ಮಾಡಿಲ್ಲ, ಜೆಡಿಎಸ್ ಕಚೇರಿ ಉದ್ಘಾಟನೆಯನ್ನೂ ಮುಂದೆ ಹಾಕುತ್ತಿದ್ದಾರೆ, ಇನ್ನೊಂದು ಕಡೆ ಮೋದಿ ಹವಾ ಕರ್ನಾಟಕಕ್ಕೂ ರವಾನೆಯಾದರೆ ಏನು ಗತಿ ಎಂಬ ಲೆಕ್ಕಾಚಾರದಲ್ಲೂ ಜೆಡಿಎಸ್ ನಾಯಕರು ತೊಡಗಿದ್ದಾರೆ