ಸಮ್ಮಿಶ್ರ ಕಂಟಕವಾಗಿದ್ದ ಅಧಿಕಾರಿಳ ಲಿಸ್ಟ್ ಇದು.

ಸಮ್ಮಿಶ್ರ ಗೊಂದಲ ಇನ್ಸೆಪೆಕ್ಟರ್ ವರ್ಗಕ್ಕೆ ದಿಡೀರ್ ಬ್ರೇಕ್.

ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಸರ್ಕಲ್ ಇನ್ಸೆಪೆಕ್ಟರ್ ವರ್ಗಾವಣೆ ಮಾಡಿ ಸರ್ಕಾರ ನಿನ್ನೆ ತಾನೆ ಮಾಡಿದ್ದ ಆದೇಶಕ್ಕೆ ದಿಡೀರ್ ಬ್ರೇಕ್ ಬಿದ್ದಿದೆ. ಈ ಸಂಬಂಧ ಪೋಲೀಸ್ ವರಿಷ್ಟರು ವೈರ್ ಲೆಸ್ ಸಂದೇಶ ಕಳುಹಿಸಿ ಯಾವುದೇ ಅಧಿಕಾರಿಗಳನ್ನು ರಿಪೋರ್ಟ್ ಮಾಡಿಕೊಳ್ಳದಂತೆ ಸೂಚಿಸಲಾಗಿದೆ.

not relieve / allow to join the PI(civil)’s as per chief office vide order No.CB-2/09/2018-19. O.B.418/2018 dated 24-09-2018 until further order.
from: IGP admin, Police Chief office, Bangalore.

ಆಯಾ ಕ್ಷೇತ್ರದ ಎಂಎಲ್ ಎ ಗಳು ನೀಡಿರುವ ಶಿಪಾರಸು ಪತ್ರ ಕೊಟ್ಟಿದ್ದರೂ ಬೇರೆಯದೇ ಅಧಿಕಾರಿಗಳನ್ನು ನೇಮಕ ಮಾಡಿದ್ದರಿಂದ ಹಲವು ಶಾಸಕರು ಬೇಸರಗೊಂಡು ಮುಖ್ಯಮಂತ್ರಿಗಳ ಕರೆ ಮಾಡಿದ್ದರ ಹಿನ್ನೆಲೆಯಲ್ಲಿ ದಿಡೀರ್ ಬ್ರೇಕ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಡೀಲ್ ಓಕೆ,

ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಜಾರಕೀಹೋಳಿ ಬ್ರದರ್ ಗಳು ಹಾಗೂ ಸಿಎಂ ನಡುವೆ ನಡೆದ ದಿಡೀರ್ ಭೇಟಿ ಮೇಲುನೋಟಕ್ಕೆ ಸುಖಾಂತ್ಯ ಕಂಡಿದೆ. ಈ ಡೀಲ್ ಓಕೆ ಆಗಿದ್ದು ಹೇಗೆ ಎಂಬ ವಿವರಗಳು ಸರ್ಕಾರಿ ಬಾಬು ಗೆ ಲಭ್ಯವಾಗಿವೆ.

ಜಾರಕೀ ಹೋಳಿ ಸಹೋದರರು ಹೇಳಿದವರಿಗೆ ಒಂದು ಮಂತ್ರಿ ಸ್ಥಾನ, ಒಂದು ನಿಗಮ ಮಂಡಳಿ ಹಾಗು ಒಬ್ಬರು ಎಮ್ ಎಲ್ ಸಿ ಸ್ಥಾನವನ್ನು ಜಾರಕೀ ಹೋಳಿ ಸಹೋದರರು ಹೇಳಿದವರಿಗೆ ಕೊಡಲಾಗುವುದು ಎಂದು ಸಿ ಎಂ ಕುಮಾರ ಸ್ವಾಮಿ ಒಪ್ಪಿಕೊಂಡ ನಂತರವೇ ಜಾರಕೀ ಬ್ರದರ್ಸ್ ತಣ್ಣಗಾಗಿದ್ದಾರೆ.

ಇದೂ ಅಲ್ಲದೆ ಲಕ್ಷಿ ಹೆಬ್ಬಾಳ್ಕರ್ ಬೆಳಗಾವಿ ರಾಜಕಾರಣದಿಂದ ದೂರ ಇಡುತ್ತೇವೆ, ಅವರ ಕ್ಷೇತ್ರದ ಕೆಲಸಗಳ ಹೊರತಾಗಿ ಬೇರೆಯದಕ್ಕೆ ಮಹತ್ವ ನೀಡದಿರಲು ತೀರ್ಮಾನಿಸಿದ್ದಾರೆ.

ಜಾರಕೀಹೋಳಿ ಸಹೋದರರು ೧೦ ಜನ ಎಮ್ ಎಲ್ ಎ ಗಳ ರಾಜೀನಾಮೆ ಪತ್ರಗಳನ್ನೆ ಕೊಂಡೊಯ್ದಿದ್ದರಿಂದ ಸಿಎಂ ಕೆಲಕಾಲ ಬೆಚ್ಚಿಬಿದ್ದು ಜಾರಕೀ ಬ್ರದರ್ ಗಳ ಎಲ್ಲಾ ಕೋರಿಕೆ ಈಡೇರಿಸಲು ಒಪ್ಪಾದ್ದಾರೆಂದು ತಿಳಿದು ಬಂದಿದೆ.

ಈ ನಡುವೆ ಇದೇ ನೆಪದಲ್ಲಿ ಎಮ್ ಟಿ ಬಿ ನಾಗರಾಜ್ , ಪ್ರತಾಪ್ ಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿರುವುದು ಸಿ ಎಂ ಗೆ ತಲೆ ನೋವಾಗಿದೆ ಎನ್ನಲಾಗಿದೆ.

ಸರ್ಕಾರಿಬಾಬು Exclusive. ದಿನೇಶ್ ಗುಂಡೂರಾವ್ KPCC ಅಧ್ಯಕ್ಷ.

ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಆಯ್ಕೆಯಾಗಿದ್ದಾರೆ.

ಈ ಕುರಿತ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದ್ದು ಇಂದು ಸಂಜೆ ಅಥವಾ ನಾಳೆ ಘೋಷಣೆ ಆಗಲಿದೆ.

ದಿನೇಶ್ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ರಾಹುಲ್ ಗಾಂಧಿ ಮಹತ್ವದ ಜವಾಬ್ದಾರಿಯನ್ನು ಹೊರುವಂತೆ ಹಾಗು ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸೀಟು ಗೆಲ್ಲುವ ಕಡೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಗಾಧಿಗೆ ಘಟಾನುಘಟಿಗಳೇ ಪ್ರಯತ್ನ ನಡೆಸುತ್ತಿದ್ದರೂ ರಾಹುಲ್ ಗಾಂಧಿ ಯುವಕರಿಗೆ ನೀಡಲು ತೀರ್ಮಾನಿಸಿದ್ದಾರೆ. ಎಚ್. ಕೆ. ಪಾಟೀಲ್ , ಬಿ.ಕೆ. ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿದ್ದರು.

ಆದರೆ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಯುವಕರಿಗೆ ಆದ್ಯತೆ ನೀಡಲು ಮುಂದಾಗಿದ್ದು ಕಾಂಗ್ರೇಸ್ ನಲ್ಲಿ ಹಿರಿಯರಿಗೆ ಹಿಂದಿನ ಸ್ಥಾನ ನೀಡುವುದು ಖಚಿತವಾಗಿದೆ.

ಎಂ.ಬಿ. ಶ್ರೀನಿವಾಸಗೌಡ.