ಡೀಲ್ ಓಕೆ,

ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಜಾರಕೀಹೋಳಿ ಬ್ರದರ್ ಗಳು ಹಾಗೂ ಸಿಎಂ ನಡುವೆ ನಡೆದ ದಿಡೀರ್ ಭೇಟಿ ಮೇಲುನೋಟಕ್ಕೆ ಸುಖಾಂತ್ಯ ಕಂಡಿದೆ. ಈ ಡೀಲ್ ಓಕೆ ಆಗಿದ್ದು ಹೇಗೆ ಎಂಬ ವಿವರಗಳು ಸರ್ಕಾರಿ ಬಾಬು ಗೆ ಲಭ್ಯವಾಗಿವೆ.

ಜಾರಕೀ ಹೋಳಿ ಸಹೋದರರು ಹೇಳಿದವರಿಗೆ ಒಂದು ಮಂತ್ರಿ ಸ್ಥಾನ, ಒಂದು ನಿಗಮ ಮಂಡಳಿ ಹಾಗು ಒಬ್ಬರು ಎಮ್ ಎಲ್ ಸಿ ಸ್ಥಾನವನ್ನು ಜಾರಕೀ ಹೋಳಿ ಸಹೋದರರು ಹೇಳಿದವರಿಗೆ ಕೊಡಲಾಗುವುದು ಎಂದು ಸಿ ಎಂ ಕುಮಾರ ಸ್ವಾಮಿ ಒಪ್ಪಿಕೊಂಡ ನಂತರವೇ ಜಾರಕೀ ಬ್ರದರ್ಸ್ ತಣ್ಣಗಾಗಿದ್ದಾರೆ.

ಇದೂ ಅಲ್ಲದೆ ಲಕ್ಷಿ ಹೆಬ್ಬಾಳ್ಕರ್ ಬೆಳಗಾವಿ ರಾಜಕಾರಣದಿಂದ ದೂರ ಇಡುತ್ತೇವೆ, ಅವರ ಕ್ಷೇತ್ರದ ಕೆಲಸಗಳ ಹೊರತಾಗಿ ಬೇರೆಯದಕ್ಕೆ ಮಹತ್ವ ನೀಡದಿರಲು ತೀರ್ಮಾನಿಸಿದ್ದಾರೆ.

ಜಾರಕೀಹೋಳಿ ಸಹೋದರರು ೧೦ ಜನ ಎಮ್ ಎಲ್ ಎ ಗಳ ರಾಜೀನಾಮೆ ಪತ್ರಗಳನ್ನೆ ಕೊಂಡೊಯ್ದಿದ್ದರಿಂದ ಸಿಎಂ ಕೆಲಕಾಲ ಬೆಚ್ಚಿಬಿದ್ದು ಜಾರಕೀ ಬ್ರದರ್ ಗಳ ಎಲ್ಲಾ ಕೋರಿಕೆ ಈಡೇರಿಸಲು ಒಪ್ಪಾದ್ದಾರೆಂದು ತಿಳಿದು ಬಂದಿದೆ.

ಈ ನಡುವೆ ಇದೇ ನೆಪದಲ್ಲಿ ಎಮ್ ಟಿ ಬಿ ನಾಗರಾಜ್ , ಪ್ರತಾಪ್ ಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿರುವುದು ಸಿ ಎಂ ಗೆ ತಲೆ ನೋವಾಗಿದೆ ಎನ್ನಲಾಗಿದೆ.

ನಿಮ್ಮ ಟಿಪ್ಪಣಿ ಬರೆಯಿರಿ